ಮೂರು ಮುಖ್ಯ ಲಕ್ಷಣಗಳು
ನಮಸ್ಕಾರ ಎಲ್ಲರಿಗೂ. ಹಿಂದಿನ ಎರಡು ಲೇಖನಗಳಲ್ಲಿ ನಾವು ಜೀವನದ ಗುರಿ ಎಂದರೇನು ಮತ್ತು ಒಳ್ಳೆಯ ಗುರಿಯನ್ನು ಹೇಗೆ ಇಟ್ಟುಕೊಳ್ಳಬೇಕು, 4 ವಿಧದ ಪುರುಷಾರ್ಥ ಇವುಗಳ ಬಗ್ಗೆ ನೋಡಿದೆವು. ಈ ಲೇಖನದಲ್ಲಿ ಜೀವನದ ಗುರಿಯ 3 ಲಕ್ಷಣಗಳು, ಇವತ್ತಿನ ಎಂದರೆ 1950ನೇಯ ವರ್ಷದ ಬದುಕು ಹೇಗಿದೆ ಮತ್ತು ಭಾರತದ ಕ್ಷೀಣ ದೆಶೆಗೆ ಏನು ಕಾರಣ ಇವುಗಳ ಬಗ್ಗೆ ಶ್ರೀ ಡಿವಿಜಿಯವರು ತಮ್ಮ ವಿಚಾರಧಾರೆಯನ್ನು ಹರಿಸುತ್ತಾರೆ.
ಶ್ರೀ ಡಿವಿಜಿಯವರು ತಮ್ಮ ವಿಚಾರಧಾರೆಯನ್ನು ಮುಂದುವರಿಸುತ್ತಾ ಸಮಾಜದ ಪ್ರಗತಿಗೆ ಬೇಕಾದ ಮೂರು ಲಕ್ಷಣಗಳನ್ನು ವಿವರಿಸುತ್ತಾರೆ. ಬದುಕನ್ನು ಒಳ್ಳೆಯದನ್ನಾಗಿ ಮಾಡಿಕೊಂಡು ಚೆನ್ನಾಗಿ ಉಪಯೋಗಿಸುವುದು ನಮಗಿರುವ ಕರ್ತವ್ಯ ಎಂಬ ಬುದ್ಧಿ ಜನರಲ್ಲಿ ಬೇರೂರು ನಿಲ್ಲಬೇಕು. ಅದೇ ಪ್ರಗತಿ ಎನ್ನುತ್ತಾರೆ. ಇದರಿಂದ ಡಿವಿಜಿಯವರಿಗೆ ಜನರು ಅವರವರ ಬದುಕನ್ನು ಚೆನ್ನಾಗಿ ಮಾಡಿಕೊಂಡು, ಅವರ ವೈಯಕ್ತಿಕ ಜೀವನ ಪ್ರಗತಿಯಾಗಿ, ಸಮಾಜವು ಮುಂದೆ ಬರಬೇಕು ಎಂಬ ಆಶಯ ಅವರಿಗಿದೆ ಇಂದು ಗೊತ್ತಾಗುತ್ತದೆ. ಅವರು ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಮುಂದಕ್ಕೆ ಅಥವಾ ಮೇಲಕ್ಕೆ ಹೋಗುವ ವೈಕ್ತಿಯುಕ ಮತ್ತು ಸಮಾಜದ ನಡಿಗೆಗೆ ಪ್ರಗತಿ ಎನ್ನುತ್ತಾರೆ .
ಒಳ್ಳೆಯದನ್ನು ಹಿಂದೆ ವಿವರಿಸಿದ್ದೇವೆ. ಬಹುಕಾಲದಿಂದ ಸಮಾಜ ಯಾವುದನ್ನು ಒಳ್ಳೆಯದೊಂದು ಸಂಪಾದಿಸಲು ಯೋಗ್ಯವಾಗಿದ್ದು ಎಂದು ಒಪ್ಪಿಕೊಂಡಿದೆಯೋ, ಆ ಸಂಪತ್ತು, ಉತ್ತಮ ಪರಿಸ್ಥಿತಿ ಒಳ್ಳೆಯದು ಎಂದುಕೊಳ್ಳೋಣ ಎನ್ನುತ್ತಾರೆ. ಹಿಂದೆ ಒಳ್ಳೆಯದೇನುವುದಕ್ಕೆ ಸತ್ ಎನ್ನುವ ಪದವನ್ನು ಉಪಯೋಗಿಸಿದ್ದರು. ಇಲ್ಲಿ ಸಮಾಜವು ಏನೆಂದು ಒಳ್ಳೆಯದು ಎಂದು ಒಪ್ಪಿಕೊಂಡಿದೆಯೋ ಅದೇ ಒಳ್ಳೆಯದು ಎಂದು ಹೇಳುತ್ತಾರೆ. ಎಲ್ಲರೂ ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಹೊಂದುವುದನ್ನು ಅದಕ್ಕೆ ಪ್ರಯತ್ನಿಶೀಲವಾಗಿರುವುದನ್ನು ಜೀವನ ಉತ್ಸಾಹ ಎಂಬ . ಮೊದಲನೆಯ\ ಲಕ್ಷಣ ಎಂದು ಹೇಳುತ್ತಾರೆ
ಎರಡನೇ ಲಕ್ಷಣ ಮನುಷ್ಯ ಪ್ರಯತ್ನದಲ್ಲಿ ನಂಬಿಕೆ ಹೆಚ್ಚಿಸಬೇಕು ಎನ್ನುತ್ತಾರೆ. ಮನುಷ್ಯನಿಗೆ ಎಷ್ಟೇ ಕಷ್ಟ ಬಂದರೂ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ , ಒಳ್ಳೆಯದು ಏನೆಂದು ವಿಚಾರಿಸಿಅದನ್ನು ಸಾಧಿಸಲು ಸ್ವಂತ ಪ್ರಯತ್ನ ಮಾಡಬೇಕು ಎಂದು ಹೇಳುತ್ತಾರೆ. ಕೆಲಸವು ಏನೆಂದು ತಿಳಿದುಕೊಂಡು ಅದನ್ನು ಧೈರ್ಯದಿಂದಲೂ ವಿವೇಕದಿಂದಲೂ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ. ಇಂತಹ ಪೌರುಷ ಪ್ರವೃತ್ತಿ ಸಮಾಜದಲ್ಲಿ ದೃಢಪಡಬೇಕು. ಈ ಪ್ರಗತಿಯ ಪ್ರವೃತ್ತಿಯ ಫಲಿತಾಂಶವೇ ಮಾನ್ಯ ವಿಜ್ಞಾನ ಶಾಸ್ತ್ರಗಳು. ಈ ಶಾಸ್ತ್ರಗಳು ಸಮಾಜದ ಪ್ರಗತಿಗೆ ಸಾಧ್ಯವಾಗಬಲ್ಲವೂ ಎಂದು ಹೇಳುತ್ತಾರೆ.
ಮೂರನೆಯ ಲಕ್ಷಣ ಜೆನರ ದೈನಂದಿನ ನಡವಳಿಕೆಯಲ್ಲಿ ಒಂದು ಸವಿಯಾದ ಸ್ನೇಹ ಭಾವ ಕಾಂತಿ ತುಂಬಿರಬೇಕು. ಜನರಲ್ಲಿ ಸೌಜನ್ಯ ಸಭ್ಯತೆಗಳು ಇರಬೇಕು.. ಸರಕಾರ, ಮಠ ಪಂಚಾಯಿತಿ ಇವುಗಳ ಹೆದರಿಕೆಯಿಂದ ಒಳ್ಳೆಯವರಾಗಿರುವ ಬದಲು ಸ್ವಾಭಾವಿಕವಾಗಿ ತಮ್ಮ ವಿವೇಕದಿಂದಪ್ರಾಮಾಣಿಕವಾಗಿರಬೇಕು ಎಂದು ಕರೆಯುತ್ತಾರೆ.
ಈ ಮೂರು ನಂಬಿಕೆಗಳಾದ 1. ಜೀವನೋತ್ಸಹ 2. ಪುರುಷ ಪ್ರಯತ್ನ 3. ಲೋಕ ಸ್ನೇಹ ಈ ಮೂರು ಗುಣಗಳು ಜನರಲ್ಲಿ ಪ್ರಬಲವಾಗಿರಬೇಕು ಎಂದು ಹೇಳುತ್ತಾರೆ ಈ ಗುಣಗಳಿಂದ ಪ್ರಗತಿ, ವಿಜ್ಞಾನ, ಸತ್ಯ, ಸೌಜನ್ಯ, ಸಮಾಜದಲ್ಲಿ ಬೆಳೆಯುತ್ತದೆ ಎಂದಿದ್ದಾರೆ.. ಇದು ಡಿವಿಜಿಯವರ ಸಮಾಜದ ಪ್ರಗತಿಗೆ ಒಂದು ಯೋಜನೆ, ಮತ್ತು ಸಮಾಜದ ಅಭಿವೃದ್ಧಿಗೆ ಒಂದು ಕರೆ ಕೊಟ್ಟಿದ್ದಾರೆ.
ಈ ಲೇಖನದಲ್ಲಿ ಶ್ರೀ ಡಿವಿಜಿಯವರು ಈ ಮೂರು ಲಕ್ಷಣಗಳನ್ನು ಪ್ರಾಮುಖ್ಯತೆ ಕೊಡುತ್ತಾರೆ. ಇದರಿಂದ ಅಂದಿನ ಜೀವನದಲ್ಲಿ ಈ ಲಕ್ಷಣಗಳು ಕಡಿಮೆ ಪ್ರಮಾಣದಲ್ಲಿ ಇದ್ದವು ಎಂದು ಊಹಿಸಬಹುದು. ನಾನು ಕೂಡ ನಮ್ಮ ಅಜ್ಜನ ವಯಸ್ಸಿನವರು ಸ್ವತಂತ್ರ ಭಾರತಕ್ಕಿಂತ ಬ್ರಿಟಿಷರು ಇದ್ದಾಗ ಆಡಳಿತ ಚೆನ್ನಾಗಿತ್ತು ಸ್ವತಂತ್ರ ಬಂದಮೇಲೆ ಇಲ್ಲ ಹಾಳಾಗಿ ಹೋಗಿದೆ ಎಂದು ಹೇಳುವುದನ್ನು ಕೇಳಿದ್ದೆ. ಇತರಹದ ಜನರ ಭಾವನೆಗಳು ಇದ್ದಾಗ ಶ್ರೀ ಡಿವಿಜಿ ಯವರು ಈಗ ವಿವೇಕಾನಂದರಂತೆ ಜನರಲ್ಲಿ ಧೈರ್ಯ ಮತ್ತು ದೃಢ ಪ್ರಯತ್ನ ತುಂಬಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಯಬಹುದು.
ಈ ವಿಷಯಗಳಿಂದ ನವ ಭಾರತದ ಪ್ರಗತಿಗೆ ಬೇಕಾದ ಲಕ್ಷಣಗಳನ್ನು ಸಮಾಜದಲ್ಲಿ ಬೆಳೆಸಲು ಈ ಲೇಖನವನ್ನು ಬರೆದಿದ್ದಾರೆ ಎನ್ನಬಹುದು. ಇದರಲ್ಲಿ ಶ್ರೀ ಡಿವಿಜಿಯವರ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರದಲ್ಲಿ ಸಮಾಜದಲ್ಲಿ ಪ್ರಗತಿಗೆ ಯಾವ ಲಕ್ಷಣಗಳನ್ನು ಬೆಳೆಸಬೇಕು ಎಂದು ಯೋಚಿಸಿ ಅವುಗಳನ್ನು ಉಪನ್ಯಾಸಗಳ ಮೂಲಕ ಮತ್ತು ಈ ಲೇಖನಗಳ ಮೂಲಕ ಸಮಾಜದಲ್ಲಿ ಬೆಳೆಸಲು ಡಿವಿಜಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಯಬಹುದು. ಡಿವಿಜಿಯವರು ಅನೇಕ ರೀತಿಯಲ್ಲಿ ಸಮಾಜದ ನಾಯಕತ್ವವನ್ನು ವಹಿಸಿದ್ದರು ಎಂದು ನೋಡಬಹುದು.
ಈ ಲಕ್ಷಣಗಳು ಶ್ರೀ ಡಿವಿಜಿಯವರು ಬರೆದ ಕಾಲಕ್ಕೆ ಅನ್ವಯಿಸುತ್ತದೆ.. ಈ ಮೌಲ್ಯಗಳು ಸಾರ್ವತ್ರಿಕ ಮೌಲ್ಯಗಳು. ಈಗಿನ ಕಾಲಕ್ಕೂ ಇದು ಅನ್ವಯಿಸುತ್ತದೆ. ಇವತ್ತು ಭಾರತ 1955 ವರ್ಷಕ್ಕಿಂತ ಆರ್ಥಿಕವಾಗಿ ಬಹಳ ಮುಂದುವರಿದಿದೆ. ವಾಣಿಜ್ಯೋದ್ಯಮಗಳು ಬಹಳ ಮುಂದುವರಿದಿವೆ ಆದುದರಿಂದ ಇಂದಿನ ಭಾರತದಲ್ಲಿ ಮೊದಲ ಎರಡು ಮೌಲ್ಯಗಳು ಸಾಕಷ್ಟು ಪ್ರಮಾಣದಲ್ಲಿ ಇವೆ ಎಂದು ಹೇಳಬಹುದು. ಪರಸ್ಪರ ಸ್ನೇಹ ಭಾವ ಇವತ್ತು ಕೂಡ ನಾವು ಬೆಳೆಸಲು ಪ್ರಯತ್ನಿಸಬೇಕು. ಸ್ಮಾರ್ಟ್ ಫೋನ್ ಸೋಶಿಯಲ್ ಮೀಡಿಯಾಗಳಂದ ಪರಸ್ಪರ ಸ್ನೇಹ ಭಾವಗಳು ಕಡಿಮೆಯಾಗುತ್ತಿವೆ ಎಂದು ಹೇಳಬಹುದು. ಈ ಮೂರನೆಯ ಮೌಲ್ಯ ಪರಸ್ಪರ ಸ್ನೇಹ ಭಾವ ಇದರ ಬೆಳವಣಿಗೆ ಇಂದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಬಹುದು
ಇಂದಿನ ಬದುಕು
ಈ ಲೇಖನದಲ್ಲಿ ಶ್ರೀ ಡಿವಿಜಿಯವರು ಅಂದಿನ ಪರಿಸ್ಥಿತಿಯನ್ನು ವಿಮರ್ಷಿಸಿದ್ದಾರೆ. ಹಿಂದೆ ಹೇಳಿದಂತೆ ಈ ಉಪನ್ಯಾಸಗಳು ಲೇಖನಗಳು ಸುಮಾರು ಸ್ವಾತಂತ್ರ್ಯ ಬಂದ ನಂತರ 1950 ರವರೆಗೆ ಈ ಕಾಲದಲ್ಲಿ ಬರೆದದ್ದು..
ಸಮಾಜದ ಬಗ್ಗೆ ಈ ಮಾತುಗಳನ್ನು ಅವರು ಹೇಳುತ್ತಾರೆ. ಗಾಣದ ಎತ್ತು ಕಣ್ಣು ಮುಚ್ಚಿಕೊಂಡು ಸುತ್ತಿದ್ದಾರೆ ಮರಳಿ ಮರಳಿ ತುಳಿಯುವಂತೆ ಬಹಳ ಜನರು ಒಂದು ಕುರುಡು ದಾರಿಯನ್ನು ಹಿಡಿದುಕೊಂಡು ನಡೆಯುತ್ತಿದ್ದಾರೆ. ಈ ಜೀವನದಲ್ಲಿ ವಿಚಾರ ಜ್ಞಾನ ಇಲ್ಲ ಸಹಜವಾದ ಉಲ್ಲಾಸ ಇಲ್ಲ. ಕುರಿಯ ಹಿಂದಿನಂತೆ ಯಾರನ್ನು ಅನುಸರಿಸಿ ನಡೆಯುತ್ತಿದ್ದೇವೆ. ಯಾರೋ ಹೇಳಿದ ಮಾತನ್ನು ಮಂತ್ರ ವೆಂದು ನಂಬಿ ಮುಖಂಡರನ್ನು ಮನೆದೇವರಂತೆ ಮಾಡಿಕೊಳ್ಳುತ್ತೇವೆ. ಸ್ವತಂತ್ರ ಯೋಚನೆ ಯೋಚನೆಗಳು ಇಲ್ಲ ವಿವೇಕವಿಲ್ಲ. ಸಾಹಸ ಇಲ್ಲ ಎಂದು ಡಿವಿಜಿ ಹೇಳುತ್ತಾರೆ. ಈ ವಿಷಯ ಇವತ್ತಿಗೂ ಸ್ವಲ್ಪ ಮಟ್ಟಿಗೆ ಅನ್ವಯಿಸಬಹುದು,
ಬದುಕಿನಲ್ಲಿ ಜನರು ಯಾಂತ್ರಿಕ ಜೀವನ ನಡೆಸುತ್ತಿದ್ದಾರೆ. ಗಿಡಗಳಲ್ಲಿ ದಿನಕ್ಕೂ ಹೊಸ ಚಿಗುರು, ಹೊಸಮಗ್ಗು ಕಾಣುತ್ತದೆ . ನಮ್ಮ ಜೀವನದಲ್ಲೂ ಹೊಸ ಕಾಂತಿ ಸಂಭ್ರಮಗಳು ಕಾಣಬೇಕು. ನಮ್ಮ ಬಾಳಿನಲ್ಲಿ ಹೊಸತನ ಚಿಗುರದೆ ಇದ್ದರೆ, ಉಸಿರಾಡುತ್ತಿದ್ದರು ಸತ್ತಂತೆಯೇ ಸರಿ ಎಂದು ಹೇಳುತ್ತಾರೆ. ಈ ವಿಷಯವು ಇವತ್ತಿಗೂ ಅನ್ವಯಿಸಬಹುದು..
ಜನರ ಬಾಯಲ್ಲಿ ದೇವರು, ಧರ್ಮ, ಭಕ್ತಿ, ಕರ್ಮ, ಪರಮಾತ್ಮ, ಸತ್ಯ, ಅಹಿಂಸೆ ಈ ಮಾತುಗಳು ಬರುತ್ತಲೇ ಇರುತ್ತವೆ. ಎಲ್ಲರೂ ಭಗವದ್ಗೀತೆಯ ಶ್ಲೋಕಗಳನ್ನು ಹೇಳುತ್ತಾರೆ. , ಆದರೆ ಜನರ ಜೀವನದಲ್ಲಿ ಈ ಮಾತುಗಳ ಆಚರಣೆ ಕಾಣುತ್ತಿಲ್ಲಎಂದು ಹೇಳುತ್ತಾರೆ. ಇದು ಕೂಡ ಇಂದಿನ ಕಾಲಕ್ಕೂ ಅನ್ವಯಿಸಬಹುದು.
ಭಾರತದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕೂಡ ಮಾತನಾಡುತ್ತಾರೆ. ಭಾರತದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಪ್ರಕೃತಿದತ್ತವಾದ ಸಂಪತ್ತು ಯಥೇಚ್ಛವಾಗಿದೆ. ಭೂಮಿ ಫಲವತ್ತಾಗಿದೆ. ದೊಡ್ಡ ದೊಡ್ಡ ಬೆಟ್ಟಗಳು ನದಿಗಳು ಖನಿಜಲೋಹಗಳು ಎಲ್ಲವೂ ನಮ್ಮ ದೇಶಕ್ಕೆ ಇದೆ ಎಂದು ಹೇಳುತ್ತಾರೆ.
ಆದರೂ ನಮ್ಮ ದೇಶದಲ್ಲಿರುವ ಬಡತನ ಕಷ್ಟ ಜೀವನ ಎಲ್ಲಿಯೂ ಇರಲಾರದು. ನೂರರಲ್ಲಿ 90 ಮಂದಿಗೆ ದಿನಕ್ಕೆ ಎರಡು ಹತ್ತು ಊಟವು ಕಷ್ಟವಾಗುತ್ತದೆ. ಎಲ್ಲರೂ ನಾಳೆ ಗತಿ ಏನಂದೆ ಚಿಂತಿಸುತ್ತಾರೆ. . ಯಾರಲ್ಲೂ ಸಾಹಸ ಕಾಣುತ್ತಿಲ್ಲ . ಜೀವನದಲ್ಲಿ ಮುಂದುವರೆಯಲು ಪ್ರಯತ್ನ ವಿಲ್ಲ ಜೀವನದಲ್ಲಿ ಕಳೆಯಿಲ್ಲ. ನಮ್ಮ ದೇಶಕ್ಕೆ ಮನ್ನಣೆ ಇಲ್ಲ.
ಐಶ್ವರ್ಯ ಅಷ್ಟಿದ್ದರೂ ಭಾರತ ದೇಶದಲ್ಲಿ ಏಕೆ ದಾರಿದ್ರ್ಯಎಂದು ಕೇಳುತ್ತಾರೆ
ಈ ಲೇಖನದಲ್ಲಿ ಶ್ರೀ ಡಿವಿಜಿಯವರಿಗೆ ಭಾರತ ದೇಶದ ಬಗ್ಗೆ ಇರುವ ಕಳಕಳಿ ಚೆನ್ನಾಗಿ ತೋರುತ್ತದೆ. ಭಾರತ ದೇಶದ ಜನರನ್ನು ಚೆನ್ನಾಗಿ ಅವಲೋಕಿಸಿದ್ದಾರೆ. ವಿಶ್ಲೇಷಣೆ ಮಾಡಿದ್ದಾರೆ. ಇದು ನಾವು 1945 ರಿಂದ 50ರವರೆಗೆ ಇರುವ ಸಮಾಜದ ವ್ಯವಸ್ಥೆ ಎಂದು ಕಾಣಬಹುದು. ಸ್ವಾಮಿ ವಿವೇಕಾನಂದರ ತರಹ ಭಾರತದ ಜನರನ್ನ ಸಂಕಷ್ಟವನ್ನು ದೂರ ಮಾಡಲು ಶ್ರೀ ಡಿವಿಜಿಯವರು ದೀರ್ಘ ಆಲೋಚನೆ ಮಾಡಿದ್ದಾರೆ ಎಂದು ಕಾಣಬಹುದು.
ಮೊದಲನೆಯ ಲೇಖನದಲ್ಲಿ ಸಮಾಜ ಮತ್ತು ಪ್ರತಿಯೊಬ್ಬ ಮಾನವ ಪ್ರಗತಿ ಹೊಂದಲು ಯಾವ ಯಾವ ಗುಣಲಕ್ಷಣಗಳನ್ನು ಹೊಂದಿರಬೇಕು ಎಂದು ವಿಶ್ಲೇಷಣೆ ಮಾಡಿದ್ದಾರೆ. ಎರಡನೇ ಲೇಖನದಲ್ಲಿ ಆಗಿನ ಭಾರತದ ಪರಿಸ್ಥಿತಿಯನ್ನು ಉಲ್ಲೇಖ ಮಾಡಿದ್ದಾರೆ. ಆಗ ಭಾರತದಲ್ಲಿದ್ದ ಬಡತನವನ್ನು ಬಹಳ ದುಃಖದಿಂದ ವರ್ಣಿಸಿದ್ದಾರೆ. ಅಂದಿಗೆ ಹೋಲಿಸಿದರೆ ಭಾರತ ಅರ್ಥಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಬಹುದು. ಆದರೆ ಅವರು ಹೇಳಿರುವ ಮೂರನೇ ಲಕ್ಷಣವಾದ ಪರಸ್ಪರ ಸೌಹಾರ್ದತೆ ಲೋಕ ಸ್ನೇಹ ಈ ಲಕ್ಷಣಗಳು ಇಂದು ಕಾಣಿಸುತ್ತಿಲ್ಲ. ನಮ್ಮ ಸಮಾಜದಲ್ಲಿ ಬಿರುಕುಂಟು ಮಾಡುವ ಶಕ್ತಿಗಳು ಜಾಸ್ತಿಯಾಗಿವೆ. ಸಮಾಜ ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ಕಡಿಮೆಯಾಗಿದೆ. ಡಿವಿಜಿಯವರು ಅಂದು ವಿಶ್ಲೇಷಣೆ ಮಾಡಿದಂತೆ ಇಂದಿನ ಸಮಾಜ ನಾಯಕರು ಈ ವಿಚಾರದ ಬಗ್ಗೆ ಗಮನಹರಿಸಿ ದೀರ್ಘ ಆಲೋಚನೆ ಮಾಡಿ ಪರಿಹಾರಗಳನ್ನು ಕೊಡಬೇಕಾಗಿದೆ. ಇದಕ್ಕೆ ಶ್ರೀ ಡಿವಿಜಿಯವರು ಮಾಡಿದ ತತ್ವಶಾಸ್ತ್ರದ ಮೂಲಕ ವಿಚಾರಣೆ ಬೇಕಾಗಿದೆ ಎಂದು ಕರೆ ನೀಡುತ್ತೇನೆ.
ಕ್ಷೀಣ ದೆಶೆಗೆ ಕಾರಣ
ಈ ಮುಂದಿನ ಲೇಖನದಲ್ಲಿ ಭಾರತವು ಬಹಳ ದಾರಿದ್ರದಲ್ಲಿರಲು ಕಾರಣ ಏನು ಎಂದು ವಿಶ್ಲೇಷಣೆ ಮಾಡುತ್ತಾರೆ. ಕೆಲವರು ಹೊರದೇಶದವರು ಅವರ ಅಧೀನದಲ್ಲಿರಿಸುವುದಕ್ಕೆ ಭಾರತೀಯರನ್ನು ಬಡವರಾಗಿಟ್ಟಿದ್ದರು ಎಂದು ಹೇಳುತ್ತಾರೆ.. ಆದರೆ ಡಿವಿಜಿಯವರು ಈ ದೃಷ್ಟಿಕೋನವನ್ನು ಒಪ್ಪುವುದಿಲ್ಲ. ಈ ದೇಶ ಏಕೆ ಯಾರ ಆಸಕ್ತಿಯಿಂದ ಪರಾಧೀನವಾಯಿತು ಎಂದು ಕೇಳುತ್ತಾರೆ
ಇನ್ನು ಕೆಲವರು ಈ ದೇಶದ ಜನಕ್ಕೆ ಒಗ್ಗಟ್ಟಿಲ್ಲ. ಬೇರೆಯವರ ಮೇಲೆ ಅಪ ನಂಬಿಕೆ ಅಸಹನೆ ಎಂದು ಹೇಳುತ್ತಾರೆ. . ಇದಕ್ಕೂ ಕಾರಣ ಏನು ಎಂದು ಡಿವಿಜಿಯವರು ಕೇಳುತ್ತಾರೆ.
ಇನ್ನು ಕೆಲವರು ಮತ ಜಾತಿಯಿಂದ ಜನಕ್ಕೆ ಒಗ್ಗಟ್ಟಿಲ್ಲ. ಅದರಿಂದ ಜನರ ಬುದ್ಧಿ ಕೆಟ್ಟಿದೆ ಎಂದು ಹೇಳುತ್ತಾರೆ . ಅದಕ್ಕೆ ಡಿವಿಜಿಯವರು ಹಿಂದಿನ ಕಾಲದಲ್ಲಿ ವರ್ಣಶ್ರಮ ವ್ಯವಸ್ಥೆ ಇದ್ದಾಗ ದೊಡ್ಡ ದೊಡ್ಡ ಚಕ್ರವರ್ತಿಗಳು ಶೌರ್ಯ ಸಾಹಸಗಳು ಸಂಪತ್ತು ವೈಭವಗಳು ಇರದಿಲ್ಲವೇ ಎಂದು ಕೇಳುತ್ತಾರೆ.
ಮತ್ತೆ ಕೆಲವರು ಪ್ರಕೃತಿ ವಿಜ್ಞಾನ ಶಾಸ್ತ್ರದ ಮತ್ತು ಇಂತ್ರೋಪಕರಣಗಳ ಬಳಕೆಯ ಸಾಲದು ಅದರಿಂದ ಪ್ರಗತಿ ಇಲ್ಲ ಎಂದು ಹೇಳುತ್ತಾರೆ. ಡಿವಿಜಿಯವರು ಇದನ್ನು ಭಾಗಶಃ ಒಪ್ಪುತ್ತಾರೆ.
ಜನರು ಈ ರೀತಿ ನಾನ ಕಾರಣಗಳನ್ನು ಕೇಳಿ ಕೊನೆಗೆ ಇದೆಲ್ಲಾ ದೈವೀಚ್ಛೆ ವಿಧಿ ಲೀಲೆ ಹಣೆಯ ಬರಹ ಎಂದು ಹೇಳಿ ಚರ್ಚೆ ಮುಗಿಸುತ್ತಾರೆ ಎಂದು ಹೇಳುತ್ತಾರೆ..
ಈಗ ಹೇಳಿದ ಕಾರಣಗಳಲ್ಲಿ ದೇಶದ ಜನಕ್ಕೆ ಒಗ್ಗಟ್ಟಿಲ್ಲದೆ ಇರುವುದು, ಮತ ಮತ್ತು ಜಾತಿಯಿಂದ ಒಗ್ಗಟ್ಟಿಲ್ಲದೆ ಇರುವುದು ಇವತ್ತು ಕೂಡ ನಾವು ಇದನ್ನು ಕಾಣಬಹುದು.
ಈ ಲೇಖನಗಳಲ್ಲಿ ಶ್ರೀ ಡಿವಿಜಿಯವರಿಗೆ ಸಮಾಜದ ಬಗ್ಗೆ ಇರುವ ಕಳಕಳಿ. ಸಮಾಜದಲ್ಲಿರುವ ಬಡತನ ನಿಷ್ಕ್ರಿಯತೆ, ನಿರುತ್ಸಾಹ ,ಒಗ್ಗಟ್ಟಿಲ್ಲದೇ ಇರುವುದು,
ಇವುಗಳನ್ನು ಹೇಗೆ ಹೋಗಲಾಡಿಸುವುದು ಮತ್ತು ಸಮಾಜದ ಪ್ರಗತಿ ಹೇಗೆ ಮಾಡುವುದು ಎಂದು ದೀರ್ಘಕಾಲ ಯೋಚಿಸಿದ್ದಾರೆ. ಅವುಗಳ ಬಗ್ಗೆ ಒಂದು ಪರಿಹಾರವನ್ನು ಕೂಡ ಸೂಚಿಸಿದ್ದಾರೆ. ಶ್ರೀ ಡಿವಿಜಿಯವರ ಸಮಾಜದ ಸಮಸ್ಯೆಗಳ ಸ್ಪಂದನ, ಇವುಗಳ ಬಗ್ಗೆ ಆಲೋಚನೆ. ಮತ್ತು ಪರಿಹಾರ ಕಲ್ಪನೆ ಕೂಡ ನೋಡಬಹುದು. ಇದನ್ನು ನೋಡಿ ಶ್ರೀ ಡಿವಿಜಿಯವರ ಬಗ್ಗೆ ಗೌರವ ಇನ್ನೂ ಹೆಚ್ಚುತ್ತದೆ.
ಶ್ರೀ ಡಿವಿಜಿ ಅವರು ಬರೆದ ಮೇಲೆ ಭಾರತ ದೇಶ ಸುಮಾರು 70 ವರ್ಷ ಮುಂದೆ ಹೋಗಿದೆ. ಅನೇಕ ಪ್ರಗತಿ ಸಾಧಿಸಿದೆ. ಆರ್ಥಿಕವಾಗಿ, ಕೈಗಾರಿಕೀಕರಣ ದೃಷ್ಟಿಯಿಂದ ಅನೇಕ ಪ್ರಗತಿ ಸಾಧಿಸಿದೆ. ಜಿಡಿಪಿ ದೃಷ್ಟಿಯಿಂದ ಪ್ರಪಂಚದ ಮೂರನೇ ರಾಷ್ಟ್ರದ ಕಡೆ ಸಾಗಿದೆ. ಡಿವಿಜಿ ಅವರ ಬರೆದ ಮೊದಲ ಎರಡು ಲಕ್ಷಣಗಳಾದ ಜೀವನೋತ್ಸಾಹ ಪುರುಷ ಪ್ರಯತ್ನ ಇವುಗಳ ಬಗ್ಗೆ ಭಾರತ ಬಹಳಷ್ಟು ಪ್ರಗತಿ ಸಾಧಿಸಿದೆ ಎನ್ನಬಹುದು. ಡಿವಿಜಿಯವರು ಈಗಿನ ಕಾಲದಲ್ಲಿ ಇದ್ದರೆ ನೋಡಿ ಬಹಳ ಸಂತೋಷ ಪಡುತ್ತಿದ್ದರು. ಆದರೆ ಮೂರನೇ ಲಕ್ಷಣವಾದ ಪರಸ್ಪರ ಸೌಹಾರ್ದತೆ ಸಮಾಜವನ್ನುಒಂದುಗೂಡಿಸುವುದು. ಇದರ ಬಗ್ಗೆ ಭಾರತದಲ್ಲಿ ಮತ್ತು ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಈ ಲಕ್ಷಣ ಹಿಂದಕ್ಕೆ ಹೋಗುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಗಮನಹರಿಸಿ ಡಿವಿಜಿಯವರ ಮಾರ್ಗದರ್ಶನದಿಂದ ಅವರ ತತ್ವಶಾಸ್ತ್ರ ಕೂಡಿದ ವಿಶ್ಲೇಷಣೆಯಿಂದ ನಾವೆಲ್ಲರೂ ಸೇರಿ ಇದಕ್ಕೆ ಪರಿಹಾರ ಬೇಕಾಗಿದೆ ಎಂದು ಹೇಳಿ ಈ ಲೇಖನವನ್ನು ಮುಗಿಸುತ್ತಿದ್ದೇನೆ