ಅನೇಕ ಜನ ರು ಕನ್ನಡಿಗರು, ಕನ್ನಡ ಸಂಘಗಳು ಕೆಲವು ಬಾರಿ ಶಾಸ್ತ್ರೀಯ ಕಲೆಗಳನ್ನ ಉದಾಸೀನ ರೀತಿಯಲ್ಲಿ ನೋಡುತ್ತಾರೆ ಎಂದು ಹೇಳುತ್ತಾರೆ. ಶಾಸ್ತ್ರೀಯ ಕಲೆಗಳಲ್ಲಿ ದೇವರ ನಾಮ, ವಚನ, ಭಾವಗೀತೆ, ಜಾನಪದ ಗೀತೆ ಇವೆಲ್ಲ ಸೇರಿವೆ. ಇದರ ಬಗ್ಗೆ ಒಂದು ಆಲೋಚನೆಯನ್ನು ಮಾಡೋಣ. ಇದರಲ್ಲಿ ಯಾರ ಬಗ್ಗೆಯೂ ವೈಯಕ್ತಿಕ ಟೀಕೆಗಳಿಲ್ಲ. ಸಮಾಜದ ನಡವಳಿಕೆ ಬಗ್ಗೆ ಒಂದು ತಾತ್ವಿಕ ಚಿಂತನೆ.
ಈ ವಿಷಯ ಕನ್ನಡ ಶಾಸ್ತ್ರೀಯ ಕಲೆಗಳನ್ನು ಸಂಘಟಿಸುವ ಎಲ್ಲರಿಗೂ ತಿಳಿದಿದೆ. ಹಿರಣ್ಣಯ್ಯನವರು ಒಂದು ಹಾಸ್ಯ ಚಟಾಕಿಯನ್ನು ಹೇಳುತ್ತಿದ್ದರು. “ತಮಿಳು ನಾಡಿನವರಿಗೆ,ಅವರ ಭಾಷೆಯ ಬಗ್ಗೆ, ಕಲೆಗಳ ಬಗ್ಗೆ ಸ್ವಾಭಿಮಾನ, ತೆಲುಗು ಭಾಷೆಯವರಿಗೆ…, ಕನ್ನಡಿಗರಿಗೆ ಭಾಷೆಯ ಬಗ್ಗೆ ಕಲೆಗಳ ಬಗ್ಗೆ ನಿರಭಿಮಾನ” . ಇದು ಹಾಸ್ಯವಾದರು ನಿಜ ಅಂಶವನ್ನು ಹೊಂದಿದೆ.
ಸಿನಿಮಾ ಕಲಾವಿದರು ಬಂದಾಗ, fusion music ಕಲಾವಿದರು ಬಂದಾಗ ಪ್ರೇಕ್ಷಕರು ಬಹಳ ಜಾಸ್ತಿ ಸಂಖ್ಯೆಯಲ್ಲಿ ಇರುತ್ತಾರೆ. ಇದು ಬಹಳ ಸಂತೋಷದ ವಿಷಯ. ಇದು ಸಹಜ ಧರ್ಮ. ಭಗವದ್ಗೀತೆಯಲ್ಲಿ ಇದನ್ನು ಹೇಳಿದೆ.
ಕರ್ನಾಟಕದಿಂದ ಮೇಲೆ ಹೇಳಿದ ಎರಡು ವರ್ಗಗಳನ್ನು ಬಿಟ್ಟು ಇತರ ಕಲಾವಿದರು ಬಂದಾಗ ಅವರ ಕಾರ್ಯಕ್ರಮ ಇದ್ದಾಗ, ಬಹಳ ಬಾರಿ ಅತಿ ಕಡಿಮೆ ಸಂಖ್ಯೆಯ ಜನ ಪ್ರೇಕ್ಷಕರಾಗಿರುತ್ತಾರೆ. ಇದು ಕಲಾವಿದರಿಗೆ ಬಹಳ ನೋವನ್ನು ಉಂಟು ಮಾಡುತ್ತದೆ.
ಈ ದೇಶದ ಜೀವನ ಶೈಲಿಯಲ್ಲಿ ಯಾವಾಗಲೂ ಅನೇಕ ಕಾರ್ಯಕ್ರಮಗಳು ಇರುತ್ತವೆ. ಮಕ್ಕಳ ಚಟುವಟಿಕೆಗಳು, ಆಟಗಳು, ತರಗತಿಗಳು, ಪೂಜೆಗಳು, ಪಾರ್ಟಿಗಳು ಪ್ರತಿ ವಾರಂತ್ಯದಲ್ಲಿ ತುಂಬಿಕೊಂಡಿರುತ್ತದೆ. ಯಾವಾಗಲೂ ಒಂದು ಕಾರ್ಯಕ್ರಮದಿಂದ ಇನ್ನೊಂದು ಕಾರ್ಯಕ್ರಮಕ್ಕೆ ತಂದೆ ತಾಯಿಗಳು ಮಕ್ಕಳನ್ನು ಕರೆದುಕೊಂಡು ಹೋಗಬೇಕಾಗಿರುತ್ತದೆ. ಜೀವನ ಯಾವಾಗಲೂ busy ಆಗಿರುತ್ತದೆ. ಈ ದೃಷ್ಟಿಯಿಂದ ನೋಡಿದರೆ, ಶಾಸ್ತ್ರೀಯ ಕಲೆಗಳ ಕಾರ್ಯಕ್ರಮಗಳು ಕೊನೆಯ ಆದ್ಯತೆ ಪಡೆಯುವುದರಲ್ಲಿ ತಪ್ಪೇನೂ ಇಲ್ಲ.
ಆದ್ದರಿಂದ ಸಮಾಜದ ದೃಷ್ಟಿಯಿಂದ ನೋಡಿದರೆ, ಈ ಎರಡು ಅವಶ್ಯಕತೆಗಳನ್ನು ಹೇಗೆ ಸಮತೋಲನ ಮಾಡುವುದು ಎಂಬುದರ ಬಗ್ಗೆ ಚಿಂತಿಸೋಣ.
ಶಾಸ್ತ್ರೀಯ ಕಲೆಗಳನ್ನು ಸಂಸ್ಕೃತಿಯನ್ನು, ಪ್ರೋತ್ಸಾಹಿಸಬೇಕು. ಇದನ್ನು ಎಲ್ಲರೂ ಒಪ್ಪುತ್ತಾರೆ.
ಆದರೆ busy ಯಾದ ಜೀವನದ ಮಧ್ಯೆ ಹೇಗೆ ಎರಡು ವಿಷಯಗಳನ್ನು ಸಮತೋಲನ ಮಾಡಬೇಕು ಎನ್ನುವುದು ಜನಗಳಿಗೆ ಕಷ್ಟವಾಗುತ್ತದೆ ಎನಿಸುತ್ತದೆ.
ಹಾಗಾದರೆ ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ?
ಇದಕ್ಕೆ ಎರಡು ಪರಿಹಾರಗಳು ಇವೆ ಎಂದು ಅನಿಸುತ್ತದೆ.
ಶಾಸ್ತ್ರೀಯ ಕಲೆಗಳ ಬಗ್ಗೆ ಅದರ ಉಳಿವಿಕೆಯ ಬಗ್ಗೆ ಕಲಾವಿದರ ಬಗ್ಗೆ ನಮ್ಮ ನಮ್ಮ ಜವಾಬ್ದಾರಿ, ಮತ್ತು ನಮ್ಮ ಪಾತ್ರ ಏನು ಎಂದು ಯೋಚಿಸೋಣ. ನಾವು ಅವುಗಳನ್ನು ರಕ್ಷಿಸ ದಿದ್ದರೆ ಏನಾಗುತ್ತದೆ ಎಂದು ಯೋಚಿಸೋಣ.
ಹೀಗೆ ಚಿಂತಿಸಿದರೆ ಅವುಗಳ ಬಗ್ಗೆ ನಮಗೆ ಅಭಿಮಾನ ಜಾಸ್ತಿಯಾಗುತ್ತದೆ. ಯೋಗಶಾಸ್ತ್ರ ನಾವು ಯಾವುದರ ಬಗ್ಗೆ ಚಿಂತಿಸುತ್ತೇವೆಯೋ ಅದರ ಬಗ್ಗೆ ಅಭಿಮಾನ ಜಾಸ್ತಿಯಾಗುತ್ತದೆ ಎಂದು ಹೇಳುತ್ತದೆ.
ಈ ರೀತಿ ಕಲೆಗಳು, ಕಲಾವಿದರು ನಮ್ಮವರು, ನಮ್ಮ ಕುಟುಂಬದವರು ಎಂದು ಚಿಂತಿಸೋಣ. ನಾವು ಈ ಬಗ್ಗೆ ಆದರ ತೋರದಿದ್ದರೆ ಈ ಕಾರ್ಯಕ್ರಮಗಳು ಸಂಸ್ಕೃತಿ ನಶಿಸಿ ಹೋಗಬಹುದು. ಇದರಿಂದ ಸಮಾಜಕ್ಕೆ ಒಂದು ದೊಡ್ಡ ನಷ್ಟವಾಗುತ್ತದೆ. ಆ ರೀತಿಯ ಕಾರ್ಯಕ್ರಮಗಳ ಬಗ್ಗೆ ಆದ್ಯತೆಯನ್ನು ಕೊಡೋಣ. ನಮ್ಮ ಜೀವನದ ವೇಗವನ್ನು ಕಡಿಮೆ ಮಾಡೋಣ. ವಾರಂತ್ಯದಲ್ಲಿರುವ ಕಾರ್ಯಕ್ರಮಗಳನ್ನು ಒಂದು ಸ್ವಲ್ಪ ಕಡಿಮೆ ಮಾಡಬಹುದು. ಈ ರೀತಿಯ ಆಲೋಚನೆಗಳು ಸಹಾಯಕವಾಗುತ್ತದೆ.
ಈ ತರಹದ ಕಾರ್ಯಕ್ರಮಗಳು ವರ್ಷದಲ್ಲಿ 3-4 ಬಾರಿ ಬರಬಹುದು. ಈ ಮೂರು ನಾಲ್ಕು ದಿನಗಳಲ್ಲಿ ಈ ಕಲೆಗಳಿಗೆ, ಕಲಾವಿದರಿಗೆ ಆದ್ಯತೆ ಕೊಡೋಣ. ಕಾರ್ಯಕ್ರಮಗಳಿಗೆ ಬಂದು ಅವರಿಗೆ ಬೆಂಬಲ ಕೊಡೋಣ.
ಕನ್ನಡ ಸಂಘಗಳು ಇದೇ ರೀತಿಯ ಆಲೋಚನೆಯನ್ನು ಮಾಡಿ ಶಾಸ್ತ್ರೀಯ ಕಲೆಗಳಿಗೆ ಕಲಾವಿದರಿಗೆ ಆದ್ಯತೆ ಕೊಡುವುದು ಸಮಾಜಕ್ಕೆ ಒಂದು ಮಾರ್ಗದರ್ಶನ ಮಾಡಿದ ಹಾಗೆ ಆಗುತ್ತದೆ. ಸಂಘಗಳ ಪದಾಧಿಕಾರಿಗಳು ಕನ್ನಡ ಸಮುದಾಯದ ಪ್ರತಿನಿಧಿಗಳು. ಆದ್ದರಿಂದ ಅವರಿಗೆ ವಿಧ್ಯುಕ್ತ ವಾದ ಜವಾಬ್ದಾರಿಗಳಿರುತ್ತದೆ (ceremonial responsibilities) . ಅವರು ಶಾಸ್ತ್ರೀಯ ಕಾರ್ಯಕ್ರಮಗಳಿಗೆ ಹೋಗಿ ಕಲಾವಿದರಿಗೆ ಮನ್ನಣೆ ಮಾಡಿದರೆ , ಕಲಾವಿದರಿಗೆ ಕಲೆಯ ಹಿತೈಷಿಗಳಿಗೆ ಸಂತೋಷ ಮತ್ತು ಉತ್ಸಾಹ ಹೊಂದುತ್ತದೆ. ಕಲೆಗಳ ಆದ್ಯತೆಯನ್ನು ಸಂಘಗಳ ಪದಾಧಿಕಾರಿಗಳು ಪ್ರೋತ್ಸಾಹವನ್ನು ಹೆಚ್ಚಿಸಿದಾಗ , ಸಮಾಜವು ಅದರಿಂದ ಪ್ರಭಾವಿತವಾಗುತ್ತದೆ. ಕನ್ನಡ ಸಂಘದ ಪದಾಧಿಕಾರಿಗಳಿಗೆ ಇದು ಕಳಕಳಿಯ ಬಿನ್ನಹ.
ಎಲ್ಲಾ ಕನ್ನಡ ಬಾಂಧವರಿಗೂ ಈ ವಿಷಯಗಳ ಬಗ್ಗೆ ಚಿಂತಿಸಿ ಎಂದು ಬಿನ್ನಹ. ಏನಾದರೂ ಸಲಹೆಗಳಿದ್ದರೆ ಅವುಗಳ ಬಗ್ಗೆ ಬರೆಯಿರಿ. ನಾವೆಲ್ಲರೂ ಸೇರಿ ಚರ್ಚೆ ಮಾಡೋಣ.
ಹಿಂದೆ ಹೇಳಿದಂತೆ ಇದು ಯಾರ ಬಗ್ಗೆಯೂ ವೈಯಕ್ತಿಕ ಟೀಕೆಯಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಮೇಲೆ ಹೇಳಿದ ಕಲೆಗಳನ್ನು ಕಲಾವಿದರನ್ನು ಪ್ರೋತ್ಸಾಹಿಸೋಣ, ಬೆಳೆಸೋಣ, ಸಮಾಜವನ್ನು ಇನ್ನಷ್ಟು ಎತ್ತರಕ್ಕೆ ಕರೆದೊಯ್ಯೋಣ ಎಂದು ಕಳೆಕಳಿಯ ಕರೆ.
Kannadigas, Kannada Sanghas and Classical Arts (including Devara namas, vachanas, bhaavageethes, folk songs) – a philosophical thought
Many people say that Kannadigas, Kannada Sanghas sometimes ignore classical arts. Classical arts in this context include Devara naamas , vachanas, Bhaavageethes , and folk songs. Let’s think and introspect about this. There is no personal criticism of anyone here. A philosophical analysis about the mores and behavior of society.
Everyone who organizes Kannada classical arts programs knows this. Hirannaiah used to tell a joke. “Tamils have pride in their language, arts, Telugus…, Kannadigas lack pride (nirahankaragaLu) in language and arts”. This joke has a real point.
When movie artists come, fusion music artists come, the audience is very large. This is wonderful to such music giving happiness to many people. This is Sahaja Dharma. It is said so in Bhagavad Gita.
Apart from the above mentioned two categories from Karnataka, when other artists come for their shows, very often the audience is very small. This causes great pain to artists.
There are always many activities in the lifestyle of this country. Weekends are full of activities. Children’s activities, games, classes, pujas, and parties are packed every weekend. Parents always have to take their children from one event to another. Life is always busy. From this perspective, there is nothing wrong with classical arts programs being given last priority.
From a societal point of view, let’s think about how to balance these two requirements.
Classical arts and culture should be encouraged. Everyone agrees on this.
But it seems difficult for people to balance two things in the midst of a busy life.
So how to solve this problem?
There seem to be two solutions to this.
One suggestion is Let’s think about the classical arts, our responsibility as artists, and what is our role in its survival. Let us think what will happen if we don’t nurture and protect them.
If we think like this, we will admire them more. Yoga says that we become more passionate about what we worry about.
Let’s think that the artists are ours, and they are our families. If we don’t nurture these activities, these programs may die out. This will be a great loss to society. Let’s prioritize those types of programs. Let’s slow down the pace of our lives. Weekend programs can be reduced a bit. Let us introspect and think about these things.
Such programs may come 3-4 times in a year. Let’s give priority to these arts and artists in these three to four days. Let us go to the events and support them.
If Kannada Sanghas do similar thinking and give priority to artists over classical arts, it will be leading by example and motivate everyone in the community. The officers of the associations are representatives of the Kannada community. So they have ceremonial responsibilities. If they go to classical programs and appreciate the artistes, the artistes will be happy and excited for the well-wishers of art. When Kannaga sangha officials promote the priority of the arts, society is affected by it. This is a sincere request to the officials of the Kannada Sangha.
To all my Kannada friends, please think about these things. If you have any suggestions, write about them to me. Let’s discuss together.
As previously stated this is not a personal criticism of anyone. It is a heartfelt call to come together and encourage the above-mentioned arts, nurture the artists and take the society to a higher level.