ಅಹಲ್ಯೆಯನ್ನು ನಾವು ಪಂಚ ಮಹಾ ಮಹಿಳೆಯರ ಜೊತೆ ಚಿರಸ್ಮರಣೆಯಳಾಗಿ ಪೂಜಿಸುತ್ತೇವೆ. ಆದರೆ ಈ ಪ್ರಕರಣದಲ್ಲಿ ಅನೇಕ ನೈತಿಕ ಪ್ರಶ್ನೆಗಳು ಉದ್ಭವಿಸುತ್ತದೆ. , ಇಂದ್ರ ಯಾಕೆ ಈ ರೀತಿ ವರ್ತಿಸಿದ ? ಅಹಲ್ಯಗೆ ಈ ತರಹದ ಶಿಕ್ಷೆ ಯಾಕೆ ಆಯಿತು? ಅನೇಕ ಪ್ರಶ್ನೆಗಳು ಬರಬಹುದು..
ಜಾಲತಾಣದಲ್ಲಿ ಶ್ರೀಮತಿ ಶಾಂತ ನಾಗಮಂಗಲ ಅವರ ವಿಶ್ಲೇಷಣೆಯನ್ನು ನೋಡಿ ಅದರಿಂದ ಪ್ರೇರಿತನಾಗಿ ವೇದಾಂತದ ಮೂಲಕ., ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಮೂಲಕ, ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರ ಪ್ರವಚನಗಳ ಮೂಲಕ ಮತ್ತು ನಮ್ರತೆಯಿಂದ ನನ್ನ ಅನಿಸಿಕೆಗಳ ವಿಶ್ಲೇಷಣೆಯ ಮೂಲಕ ಮಾಡುತ್ತೇನೆ .
ಶ್ರೀ ಬನ್ನಂಜೆ ಗೋವಿಂದ ಆಚಾರ್ಯರು ಪುರಾಣದ ಕಥೆಗಳನ್ನು ಅನುವಾದಿಸುವಾಗ ಅರ್ಥೈಸುವಾಗ ವೇದಾಂತ ಚೆನ್ನಾಗಿ ಗೊತ್ತಿರಬೇಕು ಎಂದು ಹೇಳುತ್ತಾರೆ. ಬಹಳ ಘಟನೆಗಳು ಸಾಂಕೇತಿಕವಾಗಿರುತ್ತದೆ .ಅವುಗಳನ್ನು ಅಕ್ಷರಶಃ ನೋಡಬಾರದು. ಸೂಕ್ಷ್ಮ ಧರ್ಮಗಳನ್ನು ನೋಡಬೇಕು ಎಂದು ಹೇಳುತ್ತಾರೆ. ಈ ಎಲ್ಲಾ ಗ್ರಂಥಗಳ ವಿಷಯಗಳನ್ನು ಆಧಾರವಾಗಿ ತೆಗೆದುಕೊಂಡು ಅದಕ್ಕೆ ನನ್ನ ವಿಶ್ಲೇಷಣೆಯನ್ನು ಸೇರಿಸಿದ್ದೇನೆ.
ಈ ಪ್ರಕರಣವನ್ನು ನಾವು ಈ ಪಾತ್ರಧಾರಿಗಳ ಪ್ರಜ್ಞಾವಸ್ಥೆಯ (Consciousness) ಮೂಲಕ ನೋಡಬೇಕು. ವೇದಾಂತದ ಪ್ರಕಾರ ಇಂದ್ರನು ಅಪರೋಕ್ಷ ಜ್ಞಾನಿ. ಬಹಳ ಎತ್ತರದ ಪ್ರಜ್ಞಾವಸ್ಥೆಯ ಜೀವಿ. ದೇವತೆಗಳ ಒಡೆಯ. ಅವನು ಇತರಹದ ಕೆಲಸ ಮಾಡಬೇಕಾದರೆ ಒಂದು ಒಳ್ಳೆಯ ಕಾರಣವಿರುತ್ತದೆ.
ಈ ದೃಷ್ಟಿಕೋನದಿಂದ ಈ ಪ್ರಕರಣವನ್ನು ನೋಡಿದಾಗ ಬೇರೆ ತರಹ ಅರ್ಥ ಮಾಡಬಹುದು.
ಶ್ರೀಮತಿ ಶಾಂತ ಅವರು ಹೇಳಿದಂತೆ ಬೇರೆ ಪುರಾಣಗಳಲ್ಲಿ ಇಂದ್ರನ ಗೌತಮರ ತಪಶಕ್ತಿಯನ್ನು ಇಳಿಸಲು ಈ ಕಾರ್ಯವನ್ನು ಮಾಡುತ್ತಾನೆ ಎಂದು ಹೇಳಿದ್ದಾರೆ. ಈ ಕಾರ್ಯವನ್ನು ಅಸೂಯೆಯಿಂದ ಮಾಡಿಲ್ಲ. ಗೌತಮರು ಸ್ವಲ್ಪ ಅಹಂಕಾರದಿಂದ ಉತ್ತಮ ಪ್ರಜ್ಞಾವಸ್ಥೆಯನ್ನು ತಲುಪಲು ತಪಸ್ಸು ಮಾಡುತ್ತಿದ್ದಾರೆ ಎನಿಸುತ್ತದೆ. ವಿನಮ್ರತೆ ಇಲ್ಲದೆ ಸಾಧನೆ ಮಾಡಿದರೆ ಆ ಸಾಧನೆಗೆ ಫಲ ಸಿಗುವುದಿಲ್ಲ. ಗೌತಮರಿಗೂ ಈ ಪಾಠವನ್ನು ಕಲಿಯಬೇಕಾಗಿದೆ. ಗೌತಮರೆ ಶಾಪದಿಂದ ಅವರಲ್ಲಿದ್ದ ಅಹಂಕಾರವು ಕಡಿಮೆಯಾಗಿ ಅವರಿಗೂ ಸಾಧನೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಅಹಲ್ಯೆಯು ಕೂಡ ಬ್ರಹ್ಮದೇವರ ಮಾನಸ ಪುತ್ರಿ. ಬಹಳ ಉತ್ತಮ ಪ್ರಜ್ಞಾವಸ್ಥೆಯ ಮಹಿಳೆ. ಅವಳಿಗೂ ಕೂಡ ಅವಳ ಸೌಂದರ್ಯದ ಬಗ್ಗೆ ಸ್ವಲ್ಪ ಅಹಂಕಾರ ಇದ್ದಿರಬಹುದು. ಅಹಲ್ಯೆಯು ಗೊತ್ತಾಗಿ ಈ ಕಾರ್ಯವನ್ನು ಮಾಡಿದಳು ಅಥವಾ ಗೊತ್ತಿಲ್ಲದೇ ಮಾಡಿದಳು ಈ ವಿಷಯದ ಬಗ್ಗೆ ಬೇರೆ ಬೇರೆ ಕಡೆ ವಿವಿಧ ಅರ್ಥಗಳು ಕಾಣುತ್ತವೆ. ಏನೇ ಇರಲಿ, ಅಹಲ್ಯೆಯು ಅಹಂಕಾರದಿಂದ ತಿಳಿದೋ ತಿಳಿಯದೆಯೋ ಈ ಕಾರ್ಯವನ್ನು ಮಾಡಿರಬಹುದು. ಗೌತಮರು ಶಾಪವೂ ಕೂಡ ಈ ಅಹಂಕಾರದ ದೋಷವನ್ನು ಕಳೆಯುತ್ತದೆ. ಅಹಲ್ಯೆಯು ಬಹಳ ಕಾಲ ತಪಸ್ಸಿನ ಸಾಧನೆಯನ್ನು ಮಾಡುತ್ತಾಳೆ. ಉನ್ನತ ಪ್ರಜ್ಞಾವಸ್ಥೆ ಯನ್ನು ತಲುಪಿ ಅತಿ ಉನ್ನತ ಮಹಿಳೆಯರ ಸ್ಥಾನದಲ್ಲಿದ್ದಾಳೆ.
ಇಂದ್ರನ ಕೂಡ ಈ ಕಾರ್ಯವನ್ನು ಗೌತಮರ ಒಳಿತಿಗಾಗಿ ಅವರ ಅಹಂಕಾರವನ್ನು ಕಳೆದು ಅವರ ಸಾಧನೆಯನ್ನು ಮುಂದುವರಿಸಲು ಮಾಡುತ್ತಾನೆ. ಶ್ರೀ ಬನ್ನಂಜೆ ಅವರು ಹೇಳಿದ ಪ್ರಕಾರ ಇಂದ್ರನು ಅ ಹಲ್ಯೆಯ ಸಂಪರ್ಕ ಮುಗಿದ ಮೇಲೆ ಹೊರಟು ಹೋಗಬಹುದಾಗಿತ್ತು. ಅವನು ಬೇಕಂತಲೇ ನಿಧಾನವಾಗಿ ಅವರ ಮುಂದೆಯೇ ಹೋಗುತ್ತಾನೆ. ಇದು ಕೂಡ ಈ ಪ್ರಕರಣವು ಗೌತಮರ ಒಳಿತಿಗಾಗಿ ಮಾಡಿದ್ದು ಎಂದು ಗೊತ್ತಾಗುತ್ತದೆ.
“ಕ್ರೋಧಮುತ್ಪಾದ್ಯ ಹಿ ಮಯಾ ಸುರಕಾರ್ಯಮಿದಂ ಕೃತಂ ” …(ವಾಲ್ಮೀಕಿ ರಾಮಾಯಣ )
“ಕ್ರೋಧವನ್ನು ಉತ್ಪಾದನೆ ಮಾಡಿ ನನ್ನಿಂದ ಈ ದೇವಕಾರ್ಯವು ಮಾಡಲ್ಪಟ್ಟಿತು. ಈ ವಾಕ್ಯದಿಂದ ಇಂದ್ರನು ಒಂದು ಒಳ್ಳೆಯ ಕೆಲಸಕ್ಕಾಗಿ ಈ ಕಾರ್ಯವನ್ನು ಮಾಡಿದ್ದಾನೆ ಎಂದು ಗೊತ್ತಾಗುತ್ತದೆ.
ಆದರೂ ಕೂಡ ಇಂದ್ರನ ತಪ್ಪು ಕೆಲಸವನ್ನು ಮಾಡಿದ್ದರಿಂದ ಅವನಿಗೂ ಅದರ ಫಲವನ್ನು ಅನುಭವಿಸಬೇಕಾಗುತ್ತದೆ. ಆದರೆ ಅವನು ಅತಿಹೆಚ್ಚಿನ ಪ್ರಜ್ಞಾವಸ್ಥೆಯ ಜೀವಿ ಆದ್ದರಿಂದ ಸುಲಭವಾಗಿ ಪ್ರಾಯಶ್ಚಿತ್ತ ಮಾಡಿ ಕಳೆದುಕೊಳ್ಳಬಹುದು.
ಆದುದರಿಂದ ಈ ಪ್ರಕರಣವನ್ನು ವೇದಾಂತದ ಮೂಲಕ, ಮತ್ತು ಪ್ರಜ್ಞಾವಸ್ಥೆಯ ಮೂಲಕ ನೋಡಿದರೆ ಗೌತಮರ ಅಹಂಕಾರವನ್ನು ಕಳೆದು ಅವರ ಸಾಧನೆಯು ಮುಂದುವರೆಯಿತು. ಅಹಲ್ಯೆಯು ಅಹಂಕಾರವು ಕಳೆದು ಅವಳ ಸಾಧನೆಯು ಮುಂದೆ ಹೋಯಿತು. . ಅವಳು ಚಿರಸ್ಮರಣೀಯ, ಮಹಾ ಮಹಿಳೆಯಾದಳು. ಇಂದ್ರನ ಕೂಡ ಇದರಲ್ಲಿ ಒಬ್ಬ ಪಾತ್ರಧಾರಿ. ಅವನ ಪಾತ್ರವನ್ನು ಕರ್ತವ್ಯವನ್ನು ನಿರ್ವಹಿಸಿದ. ಎಲ್ಲರಿಗೂ ಅವರವರ ಸಾಧನೆ ಮಾಡಿ ಅದರ ಕೊನೆಯ ಗುರಿಯನ್ನು ತಲುಪಲು ಈ ಪ್ರಕರಣ ಸಹಾಯ ಮಾಡಿತು ಎಂದು ತಿಳಿಯಬಹುದು.
ಈ ಕಥೆಯು ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ: ದೈವಿಕ ಮಾರ್ಗದರ್ಶನದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು-ಅದು ಋಷಿಯಾಗಿರಲಿ, ಸದ್ಗುಣದ ಮಹಿಳೆಯಾಗಿರಲಿ ಅಥವಾ ದೈವಿಕ ಜೀವಿಯಾಗಿರಲಿ-ದೇವರ ಅಂತಿಮ ಯೋಜನೆಯನ್ನು ಪೂರೈಸುವಲ್ಲಿ ಅವರವರ ಪಾತ್ರಗಳನ್ನು ವಹಿಸುತ್ತಾರೆ. ಸವಾಲುಗಳನ್ನು ಎದುರಿಸಿ ದೈವಿಕಅನುಗ್ರಹ ಮತ್ತು ಸ್ವ-ಪ್ರಯತ್ನದ ಮೂಲಕ, ಪ್ರತಿಯೊಬ್ಬರೂ ತಮ್ಮ ಆಧ್ಯಾತ್ಮಿಕ ಹಾದಿಯಲ್ಲಿ ಮುನ್ನಡೆಯುತ್ತಾರೆ. ಅಸಾಮಾನ್ಯ ಅಥವಾ ನೈತಿಕವಾಗಿ ಅಸ್ಪಷ್ಟವಾಗಿ ತೋರುವ ಘಟನೆಗಳು ಸಹ ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಆಳವಾದ ಪಾಠಗಳನ್ನು ಒಯ್ಯಬಲ್ಲವು ಎಂಬುದನ್ನು ನೆನಪಿಸುತ್ತದೆ.
References ಉಲ್ಲೇಖಗಳು:
- Mahabharata Tatparya Nirnaya by Sri Madhvacharya –https://archive.org/details/shrimad-mahabharata-tatparya-nirnaya-smt-anuradha-sridhar-eng-tatwasamshodhana-samsat-udupi-2015 . Page 261
- Q&A by Sri Keshava Rao Tadipatri: https://sites.google.com/site/madhwaprameyaqa/home/ahalya-gautama
- Q&A in Quora: https://hinduism.stackexchange.com/questions/48573/why-did-gautama-muni-curse-ahalya-did-she-know-about-indra-before-gautama-muni/61198#61198
- Pravachan by Swami Shri Raghavacharya Ji Maharaj –https://www.youtube.com/watch?v=G8JuGRnnS0U