ಶ್ರೀ ಡಿವಿ ಗುಂಡಪ್ಪನವರು ಭಾರತದ ಮತ್ತು ಜಗತ್ತಿನ ಪ್ರಮುಖ ತಾತ್ವಿಕ ಚಿಂತಕರು, ಬರಹಗಾರರು, ಪತ್ರಕರ್ತರು ಮತ್ತು ಕವಿಗಳು, .ಬಹುಮುಖ ಪ್ರತಿಭಾವಂತರು. ಇವರು ತಾತ್ವಿಕ ಗ್ರಂಥಗಳಲ್ಲಿ ಶ್ರೇಷ್ಠವಾದ ಮಂಕುತಿಮ್ಮನ ಕಗ್ಗ ಅರುಳ ಮುನಿಯನ ಕಗ್ಗ ಗ್ರಂಥಗಳನ್ನು ಬರೆದಿದ್ದಾರೆ ಈ ಗ್ರಂಥದ ಬಗ್ಗೆ ಈ ಗುಂಪಿನಲ್ಲಿ ಬಹಳ ವಿಧವಾದ ಚರ್ಚೆ,ವಿಶ್ಲೇಷಣೆ ಮತ್ತು ಬರಹಗಳು ಬಂದಿದೆ.
ಇಂತಹ ಮೇರು ಗ್ರಂಥಗಳನ್ನು ಬರೆದ ಮೇಲೆ ಶ್ರೀ ಡಿವಿಜಿಯವರು ಈಗಿನ ಕಾಲದಲ್ಲಿ ಈಗ ಹೊಸ ಶಾಸ್ತ್ರಗಳು ಬಂದಿದೆ, ಹೊಸ ಮತಗಳು ಬಂದಿವೆ. ವಿಜ್ಞಾನ ಕೂಡ ಜ್ಞಾನವನ್ನು ವಿಸ್ತರಿಸಿದೆ. ಇದರಿಂದ ನಮ್ಮ ಜೀವನದ ಸಮಸ್ಯೆಗಳನ್ನು, ನಮ್ಮ ನಂಬಿಕೆಗಳನ್ನು ಮತ್ತೊಮ್ಮೆ ವಿಮರ್ಷಿಸಬೇಕಾದ ಸಮಯ ಬಂದಿದೆ. ಈ ದೃಷ್ಟಿಯಿಂದ ಈ ಡಿವಿಜಿಯವರು ಈ ಪುಸ್ತಕವನ್ನು ಬರೆದಿದ್ದಾರೆ.
ಬಾಳಿಗೊಂದು ನಂಬಿಕೆ ಈ ಪುಸ್ತಕದಲ್ಲಿ ಶ್ರೀ ಡಿವಿಜಿಯವರು ಅವರ ಸ್ವಂತ ನಂಬಿಕೆಗಳನ್ನು ಅವುಗಳ ಬಗ್ಗೆ ಅವರ ವಿಚಾರಧಾರೆಯನ್ನು ಬರೆದಿದ್ದಾರೆ. ಅವರು ಉಪನ್ಯಾಸಗಳಲ್ಲಿ ಹೇಳಿದ ಮಾತುಗಳನ್ನು ಲೇಖನ ರೂಪದಲ್ಲಿ ಬರೆದಿದ್ದಾರೆ. ಈ ಸಣ್ಣ ಪುಸ್ತಕದಲ್ಲಿ ಸುಮಾರು 44 ಒಂದು ಅಥವಾ ಎರಡು ಪುಟದ ಲೇಖನಗಳಿವೆ, ಇವುಗಳಲ್ಲಿಜೀವನವನ್ನು ಹೇಗೆ ನಡೆಸಬೇಕು. ಈ ಯುಗದಲ್ಲಿ ಯಾವ ನಂಬಿಕೆಗಳು ಸೂಕ್ತವಾಗಿವೆ. ಇವುಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ.
ಅವರ ನಂಬಿಕೆ ಎಲ್ಲರೂ ಜೀವನವನ್ನು ಧೈರ್ಯದಿಂದ ನಡೆಸಬೇಕು, ಧರ್ಮದಿಂದ ನಡೆಸಬೇಕು ಮತ್ತು ಎಲ್ಲರಿಗೂ ಒಳ್ಳೆಯದಾಗುವಂತೆ ವರ್ತಿಸಬೇಕು, ಮಾತನಾಡಬೇಕು ಎಂದು ಹೇಳಿದ್ದಾರೆ. ಅವರಿಗೆ ಜೀವನ ವನ್ನು ಧೈರ್ಯದಿಂದ ಎದುರಿಸದೆ, ಮನೋ ದೌರ್ಬಲ್ಯದಿಂದ ವೈರಾಗ್ಯದ ಕಡೆ ನಡೆದಿರುವ ವೇದಾಂತ ಇಷ್ಟವಾಗುವುದಿಲ್ಲ ಎಂದು ತಿಳಿದು ಬರುತ್ತದೆ. ಪುಸ್ತಕವನ್ನು ಸ್ವಾತಂತ್ರ್ಯ ಬಂದ ಕೆಲವು ವರ್ಷಗಳಲ್ಲಿ ಸುಮಾರು 1950 ವರ್ಷದಲ್ಲಿ ಬರೆದಿದ್ದಾರೆ. ಇದರ ಮುನ್ನುಡಿಯ ಭಾಗದಲ್ಲಿ ಸ್ವಾತಂತ್ರ ಬಂದರೂ ಜನರಲ್ಲಿ ದೇಶ ಅಭಿಮಾನ, ಬೇರೆ ಜನಗಳ ಜೊತೆ ಗೌರವ ಈ ಲಕ್ಷಣಗಳುಕಾಣುತ್ತಿಲ್ಲ ಎಂದಿದ್ದಾರೆ. ನೂರಾರು ವರ್ಷಗಳ ದಾಸ್ಯ ಜನರ ಮನಸ್ಸನ್ನು ದುರ್ಬಲ ಮಾಡಿದೆ ಎಂದಿದ್ದಾರೆ. ಈ ವಿಚಾರಧಾರೆಯು ಈ ಪುಸ್ತಕದ ಅನೇಕ ಲೇಖನಗಳಲ್ಲಿ ಕಾಣುತ್ತದೆ. ಸ್ವಾಮಿ ವಿವೇಕಾನಂದರು ಇದೇ ಮಾತನ್ನು ಹೇಳಿದ್ದರು. “ಉತ್ತಿಷ್ಠತ, ಜಾಗ್ರತ, ಪ್ರಾಪ್ಯ ವರಾನ್ ನಿಭೋದತ” ಎಂಬ ಕಠೋಪನಿಷತ್ ವೀರವಾಣಿಯನ್ನು ಹೇಳಿದ್ದರು. ಇದೇ ವಿಚಾರ ಧಾರೆಯನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ. ಈ ಲೇಖನ ಮಾಲೆಯಲ್ಲಿ ಬಾಳಿಗೊಂದು ನಂಬಿಕೆ ಪುಸ್ತಕದ ಮುಖ್ಯ ವಿಷಯಗಳ ಬಗ್ಗೆ ಚಿಂತನೆ ನಡೆದಿರುತ್ತದೆ.
ಮೊದಲ ಕೆಲವು ಲೇಖನಗಳಲ್ಲಿ ಜೀವನದ ಗುರಿಯ ಬಗ್ಗೆ ಆಲೋಚನೆ ವಿಶ್ಲೇಷಣೆ ನಡೆದಿದೆ. ಇದನ್ನು ಈಗ ನೋಡೋಣ.
ಜೀವನದ ಗುರಿ ಇದರ ಬಗ್ಗೆ ವಿಶ್ಲೇಷಣೆ
ಶ್ರೀ DV ಗುಂಡಪ್ಪನವರು ಬಾಳಿಗೊಂದು ನಂಬಿಕೆ ಪುಸ್ತಕದ ಮೊದಲನೆಯ ಭಾಗದಲ್ಲಿ ಬಾಳಿನ ಗುರಿಯ ಬಗ್ಗೆ ಮಾತನಾಡುತ್ತಾರೆ. ಬದುಕು ಏಕೆ ಎಂಬ ಲೇಖನದಲ್ಲಿ ಕನಕದಾಸರ ದೇವರನಾಮ ಎಲ್ಲಾರು ಮಾಡಿರುವ ಕೆಲಸ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಈ ದೇವರ ನಾಮವನ್ನು ತೆಗೆದುಕೊಂಡು ವಿಚಾರ ಚಿಂತನೆ ಮಾಡುತ್ತಾರೆ. ಡಿವಿಜಿಯವರು ಊಟ ನಿದ್ದೆ ಚಿಂತೆ ಸಂತಾನೋತ್ಪತ್ತಿ ಇವುಗಳನ್ನು ಬಿಟ್ಟು ಇವುಗಳಿಂದ ಇವುಗಳಿಗಿಂತ ಮೇಲಾದ ಏನಾದರೂ ಗುರಿ ಉಂಟೆ ಎಂದು ಕೇಳುತ್ತಾರೆ. ಎರಡನೇ ಲೇಖನ “ದೊಡ್ಡ ಗುರಿ “ಯಲ್ಲಿ, ಕನಕದಾಸರ ದೇವರ ನಾಮ ವನ್ನು ಮುಂದುವರಿಸಿ, ಧ್ಯಾನ ಸಂಗೀತ ಭಜನೆಯಿಂದ ಮುಕ್ತಿಯನ್ನು ಪಡೆಯಬೇಕು ಆತ್ಮದ ಆನಂದವನ್ನು ಪಡೆಯಬೇಕು ಎಂದು ಹೇಳುತ್ತಾರೆ.
ಕಠೋಪನಿಷತ್ ಕೂಡ ಜೀವನದ ಗುರಿಯ ಬಗ್ಗೆ ಚಿಂತನೆ ನಡೆಸಿದೆ. ಆ ಗ್ರಂಥದಲ್ಲಿಇದನ್ನೇ ಶ್ರೇಯಸ್ ಮತ್ತು ಪ್ರೇಯಸ್ ಇಂದು ಎರಡು ಗುರಿಗಳ ವಿಶ್ಲೇಷಣೆ ಮಾಡುತ್ತಾರೆ. ಶ್ರೇಯಸ್ ಅಂದರೆ ಇದು ನಿವೃತ್ತಿಮಾರ್ಗ, ಭಗವಂತನನ್ನು ಹುಡುಕುವ ಮಾರ್ಗ. ಬುದ್ಧಿವಂತನು ಶ್ರೇಯಸ್ಮಾರ್ಗವನ್ನು ಹುಡುಕುತ್ತಾನೆ. ಬುದ್ಧಿ ಕಡಿಮೆ ಇರುವವನು ಪ್ರೇಯಸ್ ಮಾರ್ಗವನ್ನು ಹುಡುಕುತ್ತಾನೆ. ಪ್ರೇಯಸ್ ಮಾರ್ಗದಲ್ಲಿ ತಾತ್ಕಾಲಿಕ ಕ್ಷಣಿ ಕ ಸುಖಗಳು ಸಿಗುತ್ತವೆ . ಆದರೆ ಶಾಶ್ವತವಾದ ನಿತ್ಯ ಸುಖ ಸಿಗುವುದಿಲ್ಲ ಎಂದು ಹೇಳುತ್ತಾರೆ.
श्रेयश्च प्रेयश्च मनुष्यमेतः तौ सम्परीत्य विविनक्ति धीरः । श्रेयो हि धीरोऽभि प्रेयसो वृणीते प्रेयो मन्दो योगक्षेमाद्वृणीते ॥ २॥ (Katha. Upan. 1.2.2)
ಮಂಕುತಿಮ್ಮನ ಕಗ್ಗ ಗ್ರಂಥದಲ್ಲಿ ಕೂಡ ಈ ವಿಷಯಗಳ ಬಗ್ಗೆ ಬರೆದಿದ್ದಾರೆ.
ಏನು ಜೀವನದರ್ಥ? ಏನು ಪ್ರಪಂಚಾರ್ಥ? ।ಏನು ಜೀವಪ್ರಪಂಚಗಳ ಸಂಬಂಧ? ॥ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? ।ಜ್ಞಾನ ಪ್ರಮಾಣವೇಂ?—ಮಂಕುತಿಮ್ಮ ॥ ೪ !!
ಈ ಕಗ್ಗದಲ್ಲಿ ಕೂಡ ಡಿವಿಜಿ ಅವರು ಬದುಕಿನ ಅರ್ಥ ಪ್ರಪಂಚದ ಅರ್ಥ ಇವುಗಳ ಬಗ್ಗೆ ಆಲೋಚಿಸುತ್ತಾರೆ. ಈ ಜೀವನಕ್ಕೆ ಮತ್ತು ಪ್ರಪಂಚಕ್ಕೆ ಏನಾದರೂ ಅರ್ಥವಿದೆಯೇ ? ನಮ್ಮ ಕಣ್ಣಿಗೆ ಕಾಣದಿರುವ ಶಕ್ತಿಗಳಿವೆಯೇ? ಈ ವಿಷಯದ ಜ್ಞಾನಗಳಿಗೆ ಪ್ರಮಾಣವೇನು ಎಂದು ಹೇಳುತ್ತಾರೆ. ಶ್ರೀ ಡಿವಿಜಿಯವರ ತಾತ್ವಿಕ ಚಿಂತನೆಯ ಅಭಿವ್ಯಕ್ತಿ ಈ ಕಗ್ಗದಲ್ಲಿ ಕಾಣಿಸುತ್ತದೆ.
ಇದೇ ರೀತಿ ಬಾಳು ಎಂಥದ್ದು ( ೧೯) , ಅಂಡಲೆತ ಏಕೆ (೨೦ ) ಗಳಲ್ಲಿ ಕೂಡ ಈ ವಿಷಯದ ಬಗ್ಗೆ ಮಾತನಾಡುತ್ತಾರೆ.
ಮೂರನೆಯ ಲೇಖನ “ಅವನ ಗುರಿ ಅವನವನಿಗೆ”
ಈ ಲೇಖನದಲ್ಲಿ ಶ್ರೀ ಡಿವಿಜಿಯವರು ಪ್ರಪಂಚದಲ್ಲಿ ಲಕ್ಷ ಕೋಟಿ ಜನರಿದ್ದಾರೆ ಒಬ್ಬರಂತೆ ಇನ್ನೊಬ್ಬರಿಲ್ಲ. ಹೊರನೋಟ ಮತ್ತು ಒಳಗುಣ ಇವೆರಡರಲ್ಲೂ ಒಬ್ಬರಿಂದೊಬ್ಬರಿಗೆ ಭೇದವಿರುತ್ತದೆ. ಆದುದರಿಂದ ಪ್ರತಿಯೊಬ್ಬರು ತನ್ನ ಬಾಳು ಹೇಗೆ ನಡೆಯಬೇಕೆಂಬದನ್ನು ಅವರೇ ಕಂಡುಕೊಳ್ಳಬೇಕಾಗಿದೆ. ಒಂದೇ ಗುರಿ ಒಂದೇ ದಾರಿ ಎಲ್ಲರಿಗೂ ಆಗಲಾರದು ಹೇಳುತ್ತಾರೆ. ಗುರು ಗಳಿಂದ, ಶಾಸ್ತ್ರ ಅಧ್ಯಯನದಿಂದ ನಮಗೆ ನಮ್ಮ ಗುರಿಯ ಬಗ್ಗೆ ತಿಳಿಯಬಹುದೇ ಎಂದರೆ ಇದು ಆಗುವುದಿಲ್ಲ ಎಂದು ಹೇಳುತ್ತಾರೆ. ಅವರು ಗುರು ಮತ್ತು ಗ್ರಂಥವನ್ನು ಒಂದು ಬಟ್ಟೆಯ ಅಂಗಡಿಗೆ ಹೋಲಿಸುತ್ತಾರೆ. ಬಟ್ಟೆ ಅಂಗಡಿಯಲ್ಲಿ ಸಾವಿರಾರು ತರಹದ ಬಟ್ಟೆಗಳಿರುತ್ತದೆ. ಆ ಬಟ್ಟೆಗಳ ರಾಶಿಯಿಂದ ಒಂದೆರಡು ಆರಿಸುತ್ತೇವೆ . . ಅದೇ ತರಹ ನಾವು ಕೂಡ ಶಾಸ್ತ್ರ ಗ್ರಂಥಗಳು ಮತ್ತು ಗುರು ಉಪದೇಶ ಇವು ಕೂಡ ಕಚ್ಚಾ ಸಾಮಗ್ರಿ ಯಂತೆ. ಹಾಗೂ ದಾರಿ ದೀಪಗಳು. ಆದರೆ ಪ್ರತಿಯೊಬ್ಬರು ಅವುಗಳನ್ನು ಉಪಯೋಗಿಸಿ ತಮ್ಮ ಗುರಿಯನ್ನು ಗೊತ್ತು ಮಾಡಬೇಕು. ಗೊತ್ತಾದ ಮೇಲೆ ಒಂದೊಂದು ಹೆಜ್ಜೆ ಇಡುತ್ತಾ ಒಂದು ಸಣ್ಣ ಗುರಿಯನ್ನು ಸೇರಿ, ಅದಾದ ಮೇಲೆ ಮುಂದಿನ ಗುರಿಯನ್ನು ಸೇರಿ ಹೀಗೆ ಕ್ರಮವಾಗಿ ಮುಂದುವರಿಯಬೇಕು. ಮೊದಲೇ ಮೆಟ್ಟಿಲು ಬಹಳ ಪ್ರಮುಖವಾದದ್ದು ಯಾವ ದಿಕ್ಕಿಗೆ ನಾವು ಗುರಿ ಮಾಡಬೇಕು ಎನ್ನುವುದು ಮುಖ್ಯ ಎಂದು ಹೇಳುತ್ತಾರೆ.
ಶ್ರೀ ಡಿವಿಜಿಯವರು ಹೇಳುವಂತೆ ಎಲ್ಲ ಗುರಿಗಳು ವೈಯಕ್ತಿಕವಾಗಿದೆ. ಪ್ರತಿಯೊಬ್ಬರು ಅವರ ಗುರಿಯನ್ನು ಮಾರ್ಗವನ್ನು ಕಂಡುಕೊಳ್ಳಬೇಕು ಎಂಬುದು ಸೂಕ್ತವಾಗಿದೆ. ಭಗವದ್ಗೀತೆಯು ನಾಲ್ಕು ಮಾರ್ಗಗಳನ್ನು ಹೇಳುತ್ತದೆ. ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ರಾಜಯೋಗ. ಪ್ರತಿಯೊಬ್ಬರು ಈ ನಾಲ್ಕು ಮಾರ್ಗಗಳಲ್ಲಿ ಒಂದು ಅಥವಾ ಎರಡು ಅಥವಾ ಮೂರನ್ನು ತೆಗೆದುಕೊಳ್ಳುತ್ತಾರೆ. ಒಂದು ಮಾರ್ಗವು ಪ್ರಮುಖ ಮಾರ್ಗವಾಗಿರಬಹುದು. ಇನ್ನೂ ಒಂದೆರಡು ಮಾರ್ಗಗಳು ಅದಕ್ಕೆ ಪೂರಕವಾಗಿರುವುದು. ಆಚಾರ್ಯರುಗಳು ಕೆಲವು ಮಾರ್ಗಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಶ್ರೀ ಶಂಕರಾಚಾರ್ಯರು ಜ್ಞಾನಮಾರ್ಗಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಶ್ರೀ ರಾಮಾನುಜಾಚಾರ್ಯರು ಭಕ್ತಿ ಮತ್ತು ಶರಣಾಗತಿ ಮಾರ್ಗಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಶ್ರೀ ಮಧ್ವ ಆಚಾರ್ಯರು ಭಕ್ತಿ ಮತ್ತು ಜ್ಞಾನ ಎರಡಕ್ಕೂ ಪ್ರಾಮುಖ್ಯತೆ ಕೊಡುತ್ತಾರೆ. ಶ್ರೀ ಬಸವಣ್ಣನವರು ಕರ್ಮ ಮಾರ್ಗಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಯೋಗ ಮಾರ್ಗದಲ್ಲಿ ತೊಡಗಿದವರು ರಾಜಯೋಗ ಮಾರ್ಗಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ.
ಆದರೆ ವೇದಾಂತ ಮಾರ್ಗದಲ್ಲಿ ಮತ್ತು ಯೋಗ ಮಾರ್ಗದಲ್ಲಿ ಗುರುವಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಸರಿಯಾದ ಗುರುಗಳನ್ನು ಆರಿಸಿ ಅವರನ್ನು ನಂಬಬೇಕು. ಅವರನ್ನು ಅನುಸರಿಸಬೇಕು. ಅದೇ ರೀತಿ ಗುರುಗಳು ಕೂಡ ಸರಿಯಾದ ಶಿಷ್ಯನನ್ನು ಹುಡುಕುತ್ತಿರುತ್ತಾರೆ. ಗುರು ಶಿಷ್ಯರ ಸಂಬಂಧ ಒಂದಾದ ಮೇಲೆ ಅದು ಶಿಷ್ಯನನ್ನು ಸಾಧನೆ ಮಾರ್ಗದಲ್ಲಿ ಬಹಳ ಮೇಲೆ ಕರೆದುಕೊಂಡು ಹೋಗುತ್ತದೆ, ಶ್ರೀ ಡಿವಿಜಿಯವರು ಈ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿಲ್ಲ. ಬಹುಶಹ ಈ ಪುಸ್ತಕದ ಧ್ಯೇಯವು ಬೇರೆಯಾಗಿದ್ದುದರಿಂದ ಅದಕ್ಕೆ ಪ್ರಾಮುಖ್ಯತೆ ಕೊಡಲಿಲ್ಲ ಎನಿಸುತ್ತದೆ.
ಶ್ರೀ ಡಿವಿಜಿ ಅವರು ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳಿದಂತೆ ಈ ಪುಸ್ತಕದಲ್ಲಿ ಅವರ ಸ್ವಂತ ನಂಬಿಕೆಗಳನ್ನು ಹೇಳಿದ್ದಾರೆ. ಈ ಪುಸ್ತಕವು ಸ್ವಾತಂತ್ರ್ಯ ಬಂದ ಕೆಲವು ವರ್ಷಗಳಲ್ಲಿ ಪ್ರಕಟವಾಗಿದೆ. ಆದುದರಿಂದ ಆ ಸಮಯದಲ್ಲಿ ಆದ ಘಟನೆಗಳು, ಭಾರತೀಯರ ಮನಸ್ಸಿನ ಪರಿಸ್ಥಿತಿ, ಅಂದಿನ ವಾತಾವರಣ ಅವರ ಮನಸ್ಸಿನಲ್ಲಿ ಇದ್ದವು. ಈ ಸನ್ನಿವೇಶಗಳು, ಆಗಿನ ಪರಿಸ್ಥಿತಿ ಶ್ರೀ ಡಿವಿಜಿ ಅವರ ದೃಷ್ಟಿಕೋನ ದ ಮೇಲೆ ಪ್ರಭಾವ ಬೀರಿರಬಹುದು.
ಡಿವಿಜಿ ಅವರು ಈ ಪುಸ್ತಕವನ್ನು ಸಾಮಾನ್ಯ ಮನುಷ್ಯರ (Aam Admi) ದೃಷ್ಟಿಕೋನದಲ್ಲಿ ಬರೆದಿದ್ದೇನೆ ಎಂದು ಹೇಳಿದ್ದಾರೆ. ಅವರು ಈ ಲೇಖನಗಳಲ್ಲಿ ಹೊಟ್ಟೆಯ ಹಸಿವಿದ್ದವನಿಗೆ ವೇದಾಂತ ವೈರಾಗ್ಯ ಎಲ್ಲ ಬೇಡ ಎಂದು ಹೇಳಿದ್ದಾರೆ. ಇದು ಸರಿ ಹೌದು. ವ್ಯವಹಾರದಲ್ಲೂ ಇದನ್ನು ನೋಡುತ್ತೇವೆ. ಬಹಳ ಹಸಿವಿದ್ದವರಿಗೆ ದಿನದ ಊಟವನ್ನು ಹೊಂದಿಸುವುದು ಇದರಲ್ಲಿಯೇ ಬಹಳ ಸಮಯ ಹೋಗುತ್ತದೆ.
ಆದುದರಿಂದ ಶ್ರೀ ಡಿವಿಜಿ ಅವರು ಈ ಪುಸ್ತಕದಲ್ಲಿ ಸಾಮಾನ್ಯ ಜನರ ದೃಷ್ಟಿಕೋನದಲ್ಲಿ ಹೇಳಿರುವುದು ಸರಿಯಿನಿಸುತ್ತದೆ. ಎಲ್ಲಾ ಶಾಸ್ತ್ರ ಗ್ರಂಥಗಳು ಪಂಡಿತರ ಮತ್ತು ಹೊಟ್ಟೆ ತುಂಬಿದವರ ದೃಷ್ಟಿಕೋನದಲ್ಲಿ ಹೇಳಿರುತ್ತಾರೆ. ಶ್ರೀ ಬನ್ನಂಜೆ ಗೋವಿಂದ ಆಚಾರ್ಯರು ಹಿಂದಿನ ಕಾಲದಲ್ಲಿ ಭಾರತ ಶ್ರೀಮಂತ ದೇಶವಾಗಿತ್ತು. ಆದುದರಿಂದಲೇ ವೇದಾಂತ, ಆಧ್ಯಾತ್ಮಿಕತೆ ಮತ್ತು ಹೊರಗಿನ ಪ್ರಪಂಚ ಬಿಟ್ಟು ಜೀವನದ ಗುರಿ ಇವುಗಳ ಬಗ್ಗೆ ಯೋಚನೆ ಮಾಡಲು ಸಮಯವಾಯಿತು ಎಂದು ಹೇಳಿದ್ದಾರೆ.
ಇದನ್ನೆಲ್ಲ ಪರಿಶೀಲಿಸಿದರೆ ಶ್ರೀ ಡಿವಿಜಿಯವರು ಇದುವರೆಗೂ ಯಾರು ಗಮನ ಕೊಟ್ಟಿರದ ಸಾಮಾನ್ಯ ಮನುಷ್ಯನ ದೃಷ್ಟಿಕೋನದಿಂದ ಮಾತನಾಡುತ್ತಿದ್ದಾರೆ ಎನಿಸುತ್ತದೆ.
ಮೊದಲಿನ ಲೇಖನಗಳಲ್ಲಿ ಶ್ರೀ ಡಿವಿಜಿ ಅವರು ಬದುಕಿನ ಮೂಲಭೂತ ತತ್ವಗಳ ಬಗ್ಗೆ ಚಿಂತನೆ ಮಾಡಿದ್ದಾರೆ. ಜೀವನದ ಮೂಲಭೂತ ಅರ್ಥ ಏನು ? ನಮ್ಮ ಬದುಕಿನಲ್ಲಿ ಏನಾದರೂ ಉದ್ದೇಶವಿದೆಯಾ? ನಮ್ಮ ಬಾಳಿಗೆ ಏನಾದರೂ ಗುರಿಯನ್ನು ಇಟ್ಟುಕೊಳ್ಳಬೇಕೇ ಇಂತಹ ಪ್ರಶ್ನೆಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಸಾಮಾನ್ಯ ಮನುಷ್ಯನ ದೃಷ್ಟಿಯಿಂದ ಈ ಆಧುನಿಕ ಯುಗದ ದೃಷ್ಟಿಯಿಂದ ಮತ್ತು ಸ್ವಾತಂತ್ರ್ಯ ಪಡೆದ ನಂತರ ಭಾರತದಲ್ಲಿ ಇದ್ದ ಪರಿಸ್ಥಿತಿ- ಈ ದೃಷ್ಟಿಕೋನಗಳಿಂದ ಈ ವಿಚಾರಗಳನ್ನು ವಿಮರ್ಶೆ ಮಾಡಿದ್ದಾರೆ. ಆದ್ದರಿಂದ ಇದು ಒಂದು ನೂತನ ಆಧುನಿಕ ಯುಗದ ತತ್ವಶಾಸ್ತ್ರದ ಚಿಂತನೆ ಎನಿಸುತ್ತದೆ.
English Version:
A Study and Analysis of the Book “Baligondu Nambike” – Beliefs to lead a good life – Part 1
An analysis of the purpose of life
Sri DV Gundappa talks about the goal of life in the first part of his book “Baligondu Nambike” Beliefs and practices to lead a good life. ..He has taken lines from the popular Devara naama by Kanakadasa called “Ellaru maaduvudy hotte gaagi Genu Batte gaagi” . Sri Kanaka dasaru says All the work done for the stomach, sleep and procreation. .. DVG asks if there is something higher than eating, sleeping, worrying, breeding. In the second article, “The Big Goal”, Kanakadasa’s devara naama continues and he says that chanting the Lord’s Name through meditation and music one should attain liberation and attain bliss of the soul.
Kathopanishat also contemplates the purpose of life. In that book the two goals of life are called Shreyas and Prayas. Shreyas means it is the way of renunciation, the way to seek God. A wise man seeks the path of merit. He who is of low intellect seeks the path of preyas. Temporarily momentary pleasures are obtained in the path of Preyas. But it is said that eternal bliss cannot be attained.
श्रेयश्च प्रेयश्च मुन्यमेतः तु समप्रित्य विविनक्ती दीरः. श्रेयो ही दीरोऽभी प्रेयसो व्रिनीते प्रेयो मंडो योगक्षेमाद्वरीते ॥ 2. (Katha. Upan. 1.2.2)
Mankuthimmana has also written about these subjects in Kagga Granth.
What is the meaning of life? What is the meaning of the world? .What is the relationship between lifeworlds?Are there any powers that can not be seen by the eyes? What is the measure of knowledge?—Mankuthimma ॥ 4!!
In this thread too, DVG thinks about the meaning of life and the meaning of the world. Is there any meaning to this life and the world? Are there forces that we cannot see? What is the extent of knowledge of this subject? An expression of the philosophical thought of Sri DVG will be seen in this rope.
Similarly, they talk about this subject in Baalu Enthaddu (19) and Andaleta Eke(20).
Third Article “Each person’s belief is his own.”
In this article Mr. DVG says that there are lakhs of crores of people in the world who are not like each other. Both outward appearance and inwardness are different from every other person. So everyone has to find out for himself how to live his life. They say that the same goal and the same way cannot be for everyone. Gurus tell us that we can know our goal by studying the scriptures, but this will not happen. He compares Guru and Granth to a Clothing store. A clothing store has thousands of different types of clothing. We normally pick a couple from that pile of clothes. . In the same way, we too are the scriptures and Guru Upadesha as raw material. They are guiding lights. But everyone should use them in his/her own way and know their goal. After knowing the goal, take one step at a time, add a small goal, then add the next goal and continue in this order. It is said that the first step is very important because it shows which direction we should aim.
As Mr. DVG says all goals are personal. It is ideal that everyone should find a way to their goal. The Bhagavad Gita mentions four paths. Karma Yoga, Jnana Yoga, Bhakti Yoga and Raja Yoga. Everyone takes one or two or three of these four paths. A Person may choose one path to be a major route. A couple of other ways complement it.
Acharyas give importance to certain paths. Sri Shankaracharya gives importance to Jnana Marga- Path of Jnana. Sri Ramanujacharya emphasizes the path of devotion and surrender. Sri Madhva Acharya gives importance to path of devotion and knowledge. Sri Basavanna gives importance to the path of karma. Those who are involved in the yoga path give importance to Raja yoga path.
But in the Vedanta path and in Yoga path Guru is given great importance. Choose the right guru and trust him. They should be followed. Similarly the Guru is also looking for the right disciple. Once the Guru-disciple relationship becomes solid, it takes the disciple a long way on the path of achievement, Sri DVG has not given much importance to this matter. Perhaps the mission of this book was different so it seems that it was not given importance.
Mr. DVG has stated his own beliefs in this book as stated in the preface of this book. This book was published a few years after independence. So the events that happened at that time, the Indian state of mind, the atmosphere of that time were in his mind. These circumstances, the situation at that time may have influenced Mr. DVG’s outlook.
DVG has said that he has written this book from the perspective of a common man (Aam Admi). He said in these articles that Vedanta vairagya is not necessary for one who has a hungry stomach. Yes it’s right. We see this in business too. A lot of time goes into preparing the day’s meals for the very hungry.
So what Mr. DVG has said in this book from the point of view of common people is correct. All the scriptures are told from the point of view of the Pandits and those who have their basic needs met. Shri Bannanje Govinda Acharya has said that India was a rich country in the past. That is why it is time to think about Vedanta, spirituality and the goal of life separate from the outside world.
If we look at all this, it seems that Mr. DVG is speaking from the perspective of a common man who has not paid attention till now.
In earlier articles Mr. DVG has thought about the basic principles of life. What is the basic meaning of life? Do we have a purpose in life? He has analyzed such questions as whether we should keep any goal for our life. From the point of view of the common man, from the point of view of this modern age and the situation in India after independence, he wrote about these new ideas from those points of view. So this book seems like a new modern age philosophical thought.